ಏಕೆ ನಾಚುವೆ ನಿನ್ನ
ಮನದನ್ನೆ ಧಾತ್ರಿಯನು
ಬಿಗಿದಪ್ಪಿ ಚುಂಬಿಸಲು ಅಂಬರೇಶ ।
ಜನಕಂಜಿ ಅಬಲೆಯನು
ಕ್ಷಿತಿಜದಂಚಿಗೆ ಕರೆದು
ಮುದ್ದಿಸುವೆ ಮೈಮರೆತು ನಾನು ಬಲ್ಲೆ. ।।
ಪ್ರೀತಿ ಮಾಡಿದ ಮೇಲೆ
ಇನ್ನೇಕೆ ಅಂಜಿಕೆಯು
ಸರಳೆ ಸದ್ಗುಣೆ ಸಹಜೆ ನಮ್ಮ ಧಾತ್ರಿ ।
ಈ ಜನಕೆ ತಮ್ಮವರ
ಪ್ರೀತಿಸಲೇ ಬಿಡುವಿಲ್ಲ
ನಿಮ್ಮನೇನ್ ನೋಡುವರು ಬಾಚಿ ತಬ್ಬು. ।।
-ರವೀಂದ್ರ ಭಟ್, ದೊಡ್ನಳ್ಳಿ
ಮನದನ್ನೆ ಧಾತ್ರಿಯನು
ಬಿಗಿದಪ್ಪಿ ಚುಂಬಿಸಲು ಅಂಬರೇಶ ।
ಜನಕಂಜಿ ಅಬಲೆಯನು
ಕ್ಷಿತಿಜದಂಚಿಗೆ ಕರೆದು
ಮುದ್ದಿಸುವೆ ಮೈಮರೆತು ನಾನು ಬಲ್ಲೆ. ।।
ಪ್ರೀತಿ ಮಾಡಿದ ಮೇಲೆ
ಇನ್ನೇಕೆ ಅಂಜಿಕೆಯು
ಸರಳೆ ಸದ್ಗುಣೆ ಸಹಜೆ ನಮ್ಮ ಧಾತ್ರಿ ।
ಈ ಜನಕೆ ತಮ್ಮವರ
ಪ್ರೀತಿಸಲೇ ಬಿಡುವಿಲ್ಲ
ನಿಮ್ಮನೇನ್ ನೋಡುವರು ಬಾಚಿ ತಬ್ಬು. ।।
-ರವೀಂದ್ರ ಭಟ್, ದೊಡ್ನಳ್ಳಿ
ತಮ್ಮವರನ್ನು ಪ್ರೀತಿಸಲಾರದ್ದಕ್ಕೆ ಬೇರೆಯವರನ್ನು ನೋಡುವ ತಬ್ಬುವ ತೀಟೆ ಈ ಜನಕೆ.
ಪ್ರತ್ಯುತ್ತರಅಳಿಸಿ