ಸಹ್ಯಾದ್ರಿಯ ಉತ್ತುಂಗದ
ಶಿರದಿ ಪವಡಿಸಿರುವ ಪುರವು
ಮೆರೆವ ದೇವಿ ಮಾರಿಕಾಂಬೆ
ನೆಲೆಯಾಗಿಹ ಶಿರಸಿಯು. /
ಪುಣ್ಯ ಶಿರಸಿಯೂರಿನಿಂದ
ಆರು ಮೈಲು ಪೂರ್ವದಲ್ಲಿ
ಶಂಭುಲಿಂಗ ಸ್ವಾಮಿ ನೆಲೆಸಿ
ಹರಸುತಿರುವ ಧಾಮವು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು. //
ಊರ ಹಿಂದೆ ದಟ್ಟ ಕಾಡು
ಎದುರಿನಲ್ಲಿ ಬಯಲುಗದ್ದೆ
ಇರುವ ಮೂರು ಕಣಿವೆಗಳಲಿ
ನಳನಳಿಸುವ ತೋಟವು. /
ಬೆಟ್ಟ ಬೇಣ ತೆಂಗು ಕಂಗು
ಸುತ್ತ ಹರಿದ್ವರ್ಣ ಸೊಬಗು
ಕೋಡಿ ಹರಿಸಿ ಬೀಗುತಿರುವ
ಹರಡಿದಾರು ಕೆರೆಗಳು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು. //
ಶಂಭುಲಿಂಗ ಸ್ವಾಮಿ ಗುಡಿಯು
ಸಲಿಲ ತೀರ್ಥ ಹೊಂಡವು
ಏಳು ದಶಕ ಕಳೆದ ಹೆಮ್ಮೆ
ಮೂಡಿಸಿರುವ ಶಾಲೆಯು. /
ಸುತ್ತ ಹತ್ತು ಹಳ್ಳಿಗಳಿಗೆ
ಪಂಚಾಯತಿ ಕೇಂದ್ರವು
ಎಲ್ಲ ರೈತ ಬಂಧುಗಳಿಗೆ
ಬೆನ್ನೆಲುಬಿನ ಸಂಘವು.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು. //
ಮುರಿದ ಎಲುಬು ಕೀಲುಗಳಿಗೆ
ದಿವ್ಯೌಷಧ ಇಲ್ಲಿದೆ.
ಜಿಲ್ಲೆಯಲ್ಲೆ ಹೆಸರುವಾಸಿ
ಡಬ್ಬಿ ಬೆಲ್ಲ ನಮ್ಮದೇ.
ಸ್ನೇಹಪರರು ಊರಜನರು
ಕ್ರೀಡೆ ಕಲೆಯ ರುಚಿಯಿದೆ.
ಜನಿಸಬೇಕು ಮತ್ತೆ ಇಲ್ಲೇ
ಇದೇ ನೆಲದ ಕನಸಿದೆ.
ಇದೇ ನನ್ನ ಹುಟ್ಟಿದೂರು ದೊಡ್ನಳ್ಳಿ ಗ್ರಾಮವು. //
-ರವೀಂದ್ರ ಭಟ್, ದೊಡ್ನಳ್ಳಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ