Monday 30 December 2013

AIM FOR SEVA

               ಗತದ ಬಗ್ಗೆ ಹಿಂದಿನ ಮೂರು ಬ್ಲಾಗ್ ಗಳಲ್ಲಿ ಹಂಚಿಕೊಂಡಿದ್ದೇನೆಈಗ ವರ್ತಮಾನದ ಒಂದು ತುರ್ತಿನ ಬಗ್ಗೆ ಅಹರ್ನಿಶಿದುಡಿಯುತ್ತಿರುವ ಒಬ್ಬ  ಮಹಾನುಭಾವರ ಕುರಿತು ಹೇಳಿಯೇ ಮುಂದೆ ಸಾಗಬೇಕಾಗಿದೆ
           ಸ್ವಾಮಿ ಚಿದ್ರೂಪಾನಂದರು ಕಳೆದ ೩೫-೩೬ ವರ್ಷಗಳಿಂದಲೂ ಅಧ್ಯಾತ್ಮದ ಜೊತೆ ಜೊತೆಗೇ ಸಮಾಜದ ನಿರ್ಗತಿಕರಉನ್ನತಿಗಾಗಿ ಅವಿಶ್ರಾಂತರಾಗಿ ದುಡಿಯುತ್ತಿದ್ದಾರೆಈಗ್ಗೆ ಕೆಲ ವರ್ಷಗಳ ಹಿಂದೆ  ದೇಶಕ್ಕೆ ಭೆಟ್ಟಿ ನೀಡಿದ C£Àå ಧರ್ಮಗುರುಗಳೊಬ್ಬರುvÀªÀÄä zsÀªÀÄðzÀ ಬೆಳೆ  ತೆಗೆಯಲು ಭಾರತ ಅತ್ಯಂತ ಹುಲುಸಾದ ಪ್ರದೇಶವಾಗಿದ್ದುಇನ್ನು ನೂರುವರ್ಷಗಳಲ್ಲಿ ಇಲ್ಲಿನ ಪ್ರತಿಯೊಂದು ಮನೆಯಲ್ಲೂ vÀªÀÄä zsÀªÀÄðzÀ ಗುಣಗಾನ ಕೇಳಿಬರಬೇಕುಎಂದು  ºÉýgÀĪÀ ºÉýPÉAiÀÄ£ÀÄß ¥ÀqÉzÀÄPÉÆAqÀ ಸ್ವಾಮಿ ದಯಾನಂದ ಸರಸ್ವತಿªÀgÀÄ ಹಿಂದೂ  ಸಂಸ್ಕೃತಿಯನ್ನು ರಕ್ಷಿಸುವಜೊತೆಗೇ ಅದರಲ್ಲಿನ ಸಂಕುಚಿತತೆಯನ್ನು ದೂರ ಮಾಡುವ ಕುರಿತು ಧೀರ ಪ್ರತಿಜ್ಞೆAiÀÄ£ÀÄß ಕೈಗೊಂಡು  AIM FOR SEVA  ಸಂಸ್ಥೆAiÀÄ£ÀÄß  ಹುಟ್ಟುಹಾಕಿzÀgÀÄ.

ಸ್ವಾಮಿ  ಚಿದ್ರೂಪಾನಂದgÀÄ ಗುರುಗಳಾದ  ಪೂಜ್ಯ ಸ್ವಾಮಿ ದಯಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ  PÀ£ÁðlPÀzÀ ¸ÀAAiÉÆÃdPÀgÁV ಸೇವಾನಿರತರಾದರುಕಡು ಬಡವರ ನಿರ್ಗತಿಕತೆಯನ್ನು ಬಂಡವಾಳ ಮಾಡಿಕೊಂಡು ಸೇವೆಯಸೋಗಿನಲ್ಲಿ ಮತಪರಿವರ್ತನೆಯನ್ನು ಸಹ ಮಾಡಿ ಮುಗಿಸಿ ಬಿಡುತ್ತಿದ್ದರೋಅದೇ ಬಡವರ ಮನೆ ಬಾಗಿಲಿಗೇ ಹೋಗಿಅವರಮಕ್ಕಳನ್ನು ಪಡೆದು ದೇಶಾದ್ಯಂತ ಇರುವ ತಮ್ಮ ಸಂಸ್ಥೆಯ "ಛಾತ್ರಾಲಯ"ಗಳಲ್ಲಿ ಅವರಿಗೆ ಸಮಕಾಲೀನ ಶಿಕ್ಷಣದ ಜೊತೆಭಗವದ್ಗೀತೆ ಹಾಗೂ ನೂರಾರು ಶ್ಲೋಕಗಳನ್ನು ಸಹ  ಕಲಿಸುತ್ತಾ¸ÀA¸ÁÌgÀUÀ¼À£ÀÄß PÉÆqÀÄvÁÛ ಅವರವರಮಾತೃಭಾಷೆಯ ಜೊತೆ ರಾಜ್ಯಭಾಷೆಇಂಗ್ಲಿಷ್ ಮತ್ತು ಹಿಂದಿಯಲ್ಲಿ   ವಿದ್ಯಾರ್ಥಿಗಳನ್ನು ಪರಿಣಿತರನ್ನಾಗಿಸುತ್ತಿದ್ದಾರೆದೇಶಾದ್ಯಂತಇರುವ ಇಂತಹ  "ಛಾತ್ರಾಲಯ"ಗಳ ಸಂಖ್ಯೆ ಎಷ್ಟು ಗೊತ್ತೇ ?.  ಬರೋಬ್ಬರಿ ೧೦೦+ F J®è ªÀÄPÀ̼ÀÄ ಅಪ್ಪಟದೇಶಾಭಿಮಾನಿಗಳಾಗಿ, F £ÀªÀÄä ¨sÀgÀvÀ ¨sÀÆ«ÄAiÀÄ, ¨sÁgÀvÀ zÉñÀzÀ ¸ÀvÀàçeÉUÀ¼ÁVತಯಾರಾಗುತ್ತಿದ್ದಾರೆಇನ್ನು ಇದೆಲ್ಲದರ ಹಿಂದಿರುವ ಪ್ರೇರಕ ಶಕ್ತಿAiÀiÁVgÀĪÀ ೮೬ರ ಹರೆಯದ  ಸ್ವಾಮಿ ದಯಾನಂದಸರಸ್ವತಿಯವರು ದೇಶದೆಲ್ಲೆಡೆ, dUÀvÀÛ£ÁzÀåAvÀ ಸುತ್ತಾಡುತ್ತ  ¸ÉêÁ «µÀAiÀÄzÀ°è ಜನಜಾಗೃತಿ ಮಾಡುತ್ತಿದ್ದಾರೆ
         ರೀತಿ ಗೀತಾ ಅಭಿಯಾನ (ಜ್ಞಾನ ಯಜ್ಞ ) ಜೊತೆ ಸಮಾಜ ಸೇವೆಯ ವ್ರತ ತೊಟ್ಟ ಸ್ವಾಮಿ ಚಿದ್ರೂಪಾನಂದರಉಪನ್ಯಾಸಗಳಿಗೆ ಕಳೆದೊಂದು ವಾರ ಧಾರವಾಡದ ಜನ ಕಿವಿಯಾಗಿದ್ದರುಅವರ ವಿರಾಟ್ ರೂಪದ  ಸಮಾಜ ಸೇವಾಕಾರ್ಯಗಳ ಪರಿಚಯ ಆಗಿದ್ದು ಸಹ ಅಲ್ಲಿಯೇನನ್ನ ಧರ್ಮಪತ್ನಿ ಸರಸ್ವತಿ ಮತ್ತು ನಾನು ಕಳೆದ ನಾಲ್ಕಾರು ವರ್ಷಗಳಿಂದ ಇಲ್ಲಿಯಲಕಮನಹಳ್ಳಿ (ಯಾಲಕ್ಕಿ ಶೆಟ್ಟರ ಕಾಲೋನಿ)ಯಲ್ಲಿರುವ ಅವರ  " AIM FOR SEVA  ದಯಾನಂದ ಧಾಮ ಛಾತ್ರಾಲಯ"ಕ್ಕೆಭೆಟ್ಟಿ ನೀಡಿ ನಮ್ಮ ಕಿಂಚಿತ್  ಸೇವೆ ಸಲ್ಲಿಸುತ್ತಿದ್ದೇವೆತನ್ನ ಅಪಾರ ಕರುಣೆಯನ್ನು ನಮ್ಮ ಮೇಲೆ ಮಳೆಗರೆದ  ಸರ್ವಶಕ್ತನುನಮ್ಮಿಂದ ಸಮಾಜ ಋಣ ತೀರಿಸಲ್ಪಡಬೇಕೆಂದು ನಿರೀಕ್ಷಿಸುತ್ತಾನೆ. "ರಕ್ಷಂತಿ ಪುಣ್ಯಾನಿ ಪುರಾಕೃತಾನಿ".... ನಮ್ಮನ್ನು ರಕ್ಷಿಸುತ್ತಿರುವ ಪುಣ್ಯ ನಮ್ಮ ಮಕ್ಕಳಿಗೂ ದಕ್ಕಬೇಕೆಂದರೆ ನಾವೂ ಪುಣ್ಯ ಸಂಚಯಿಸಬೇಕಲ್ಲವೇ ?   

Saturday 7 December 2013

ಆಪತ್ತಿಗಾದ ನೆಂಟ

         ಮಲೆನಾಡಿನ ಒಂದು ಕುಗ್ರಾಮದಿಂದ ಹೊರಬಿದ್ದು ಕರಾವಳಿ ಸೀಮೆಯ ಉಜಿರೆಯ ಹಾಸ್ಟೆಲ್ ಸೇರಿದ ನನಗೆ ಹಾಸ್ಟೆಲ್ ವಾಸ ಒಂದು ಹೊಸ ಅನುಭವದ ದ್ವಾರವನ್ನು ತೆರೆದಿತ್ತು. ಆದರೆ ಸ್ವಭಾವತಃ ನಾಜೂಕು ದೇಹಾರೋಗ್ಯದ ನನಗೆ ಈ ಬದಲಾದ ಪರಿಸರಕ್ಕೆ ಹೊಂದಿಕೊಳ್ಳುವದು ಸುಲಭದ ಮಾತಂತೂ ಆಗಿರಲಿಲ್ಲ. ಹಳ್ಳಿಯಲ್ಲಿ ಅಷ್ಟೇನೂ ಸ್ವಚ್ಹ ಹಾಗೂ ಆರೋಗ್ಯಕರ  ಪರಿಸರ ಇದ್ದಿಲ್ಲದ ಕಾರಣ ಮತ್ತು ತಿಳುವಳಿಕೆಯ ಕೊರತೆಯಿಂದಾಗಿ ನನಗೆ ಆಗಲೇ ಅಮೀಬಿಯಾಸಿಸ್ ಅಂಟಿಕೊಂಡು ಬಿಟ್ಟಿತ್ತು. ಅದೂ ಅಲ್ಲದೆ ಇಲ್ಲಿಯ  ಕುಚ್ಚಲಕ್ಕಿಯ ಅನ್ನ ನನ್ನ ಜೀರ್ಣಶಕ್ತಿಗೊಂದು ಹೊಸ ಸವಾಲಾಗಿ ಬಿಟ್ಟಿತು. ಇಷ್ಟೂ ಸಾಲದೆಂಬಂತೆ, ಕುಡಿಯುವ ನೀರಿನ ಬಾವಿಗೆ ಸೇರಿದ ಮಳೆಗಾಲದ ಹೊಸ ನೀರು ನನ್ನೊಳಗೆ ಈಗಾಗಲೇ ಇದ್ದ ಅಮೀಬಾಗಳಿಗೆ  ಹೊಸ ಬಂಧುಗಳನ್ನು  ಒದಗಿಸಿಕೊಟ್ಟಂತಾಗಿತ್ತು. ಇದಕ್ಕೆಲ್ಲ ಕಳಶವಿಟ್ಟಂತೆ ಸೇರಿಕೊಂಡ homesickness- ಎಲ್ಲ ಸೇರಿ, ನಾನು ಹಾಸ್ಟೆಲ್ ಸೇರಿದ ವಾರೊಪ್ಪತ್ತಿನಲ್ಲೇ ಒಂದು ದಿನ ವಿಪರೀತ ಹೊಟ್ಟೆ ಮುರಿತ (ನುಲಿತ) ಪ್ರಾರಂಭ ಆಗಿಬಿಟ್ಟಿತು. ಹೊಸ ಮಿತ್ರ ರಾಮಚಂದ್ರನಲ್ಲಿ ನನ್ನ ಸಂಕಟ ಹೇಳಿಕೊಂಡೆ. ಅತ್ಯಂತ ಮಾನವೀಯ ಕಳಕಳಿ ಇದ್ದ ಆತ ನನ್ನನ್ನು ಪೋಸ್ಟಾಫೀಸಿನ ಎದುರುಗಡೆ ಇದ್ದ ಡಾ।।. ಪ್ರಕಾಶ ಚಂದ್ರರ (I think, I am right with his name) ಕ್ಲಿನಿಕ್ ಗೆ ಕರೆದೊಯ್ದು, ಅವರಿಗೆ ನನ್ನ ಬಗ್ಗೆ ಎಲ್ಲ ಹೇಳಿ, ಔಷಧ ಕೊಡಿಸಿಕೊಂಡು ಬಂದ. ಆ ದಿನ ಮಳೆ ಬೇರೆ ಚಂಡಿ ಹಿಡಿದ ಮಗುವಿನ ತರಹ ರಭಸವಾಗಿ ಎಡೆಬಿಡದೆ ಸುರಿಯುತ್ತಿತ್ತು.
             ರಾತ್ರಿ ಊಟ ಆಗುವವರೆಗೆ ಲೂಸ್ ಮೋಷನ್ ಆಗ್ತಾ ಇದ್ರೂ ಸಹ ಔಷಧಿ ತನ್ನ ಪರಿಣಾಮ ಬೀರಿದ ಕೂಡಲೇ ಹೊಟ್ಟೆ ಒಂದು ಹದಕ್ಕೆ ಬರಬಹುದೆಂದು ಕಾಯ್ತಾ ಇದ್ದೆ . ರಾತ್ರಿ ಹತ್ತಕ್ಕೆ ಎಲ್ಲರೂ ಮಲಗಿ ಮಳೆಯ ಜೋಗುಳಕ್ಕೆ ಗಾಢ ನಿದ್ರೆಗೆ ಜಾರುತ್ತಿದ್ದಂತೆ ನನ್ನ ಹೊಟ್ಟೆ ನುಲಿತ ಜಾಸ್ತಿಯೇ ಆಗತೊಡಗಿತ್ತು. ಮೊದಲ ಮಹಡಿಯಲ್ಲಿದ್ದ ರೂಮಿಗೆ ತಲುಪಲು ೧೮ ಮೆಟ್ಟಿಲು ಹತ್ತಬೇಕಾಗುತ್ತಿತ್ತು. ಮೊದಲ ೧೦-೧೨ ಸಾರಿ ಬೇಧಿ ಆದಾಗ ಕೆಳಗಿಳಿದು ಹೋಗಿ ಬರುತ್ತಿದ್ದೆ. ಕೊನೆಗೆ ಇಷ್ಟು ಅಶಕ್ತತೆ ಆಯಿತೆಂದರೆ ಮೆಟ್ಟಿಲು ಏರಿ ಇಳಿದು ಮಾಡಲು  ಅಸಾಧ್ಯ ಎನಿಸತೊಡಗಿತು. ಮಳೆಗಂತೂ ಹುಚ್ಚೇ ಹಿಡಿದಿತ್ತು. ಬೆಳಗು ಹರಿಯುವ ತನಕ ಬದುಕಿ ಉಳಿದರೆ ಮುಂದೆ ನೋಡಿದರಾಯಿತೆಂದುಕೊಂಡು ಕೊನೆ ಕೊನೆಗೆ ಕೇವಲ ರೂಮಿನ ಹೊರಗೆ ಮಾತ್ರ ಬಂದು ನನ್ನ ಊಟದ ತಾಟಿನಲ್ಲೇ ಬೇಧಿ ಮಾಡಿ ಎತ್ತಿ ಕೆಳಗಿನ ಅಂಗಳಕ್ಕೆ ಎಸೆಯತೊಡಗಿದೆ. ನಿದ್ದೆ ಮಾಡುವದಂತೂ ದೂರವೇ ಉಳಿಯಿತು. ಬೆಳಗಾಗುವತನಕ ಒಟ್ಟೂ ೩೬ ಸಾರಿ ಬೇಧಿ ಆಗಿತ್ತು. ಬೆಳಿಗ್ಗೆ ಎದ್ದ ಕೂಡಲೇ ನನ್ನ ಪರಿಸ್ಥಿತಿ ನೋಡಿದ ರಾಮಚಂದ್ರನಿಗೆ ಎಲ್ಲ ನಿಚ್ಚಳವಾಗಿ ಗೊತ್ತಾಗಿ ಹೋಗಿತ್ತು. ಎಂಟು ಗಂಟೆಯ ಗಂಜಿಯೂಟ ಆಗುತ್ತಿದ್ದಂತೆ ಸೈಕಲ್ಲಿನ ಕ್ಯಾರಿಯರ್ ಮೇಲೆ ನನ್ನನ್ನು ಕೂಡ್ರಿಸಿಕೊಂಡು, ಯಾವ ಏರಿನಲ್ಲೂ ನನ್ನ ಇಳಿಸದೆ, ದಮ್ಮು ಕಟ್ಟಿ ಪೆಡಲ್           ತುಳಿಯುತ್ತ,ಶರವೇಗದಲ್ಲಿ ಅದೇ ಡಾ।।. ಪ್ರಕಾಶ ಚಂದ್ರರ ಕ್ಲಿನಿಕ್ ತಲುಪಿಸಿದ್ದ. ಅವನು ಬಿಳಿಚಿಕೊಂಡು ಹೆಣದಂತಾಗಿದ್ದ  ನನ್ನನ್ನು ಅಕ್ಷರಶಃ ಎಳೆದುಕೊಂಡು  ಒಳನುಗ್ಗಿದ ರಭಸ ನೋಡಿಯೇ ಡಾಕ್ಟರರ ಬಾಯಿ ಬಂದಾಗಿ ಹೋಗಿತ್ತು. "ನಿನ್ನೆ ಸಂಜೆ ನೀವು ಕೊಟ್ಟ ಔಷಧಿ ಹೇಗೆ ಕೆಲಸ ಮಾಡಿದೆ ನೋಡಿ. ಇವನಿಗೆ ಏನಾದರೂ ಹೆಚ್ಚು ಕಮ್ಮಿ ಆದರೆ ನಿಮ್ಮನ್ನು ಮಾತ್ರ ಸುಮ್ಮನೆ ಬಿಡೋದಿಲ್ಲ, ಡಾಕ್ಟ್ರೆ. ಏನು, ಬರೇ ದುಡ್ಡಿಗಾಗಿ ಈ ರೀತಿ ಔಸ್ದಿ ಕೊಡ್ತೀರೋ ಹೇಗೆ?" ಇತ್ಯಾದಿ ಅದು ಏನೇನು ಒದರಿದನೋ, ಆ ಡಾಕ್ಟರು ಒಂದೂ ಮಾತಾಡದೇ ಒಂದಷ್ಟು ಪುಡಿ, ಗುಳಿಗೆ ಎಲ್ಲಾ ಕೊಟ್ಟು, ಹೇಗೆ ತೆಗೆದುಕೊಳ್ಳಬೇಕೆಂಬುದನ್ನು ತಿಳಿಸಿ ನಮ್ಮನ್ನು ಸಾಗಹಾಕಿದರು. ಆ ಔಷಧಿ ಮಾತ್ರ ಭಾರೀ ಕೆಲಸವನ್ನೇ ಮಾಡಿತ್ತು. ತಕ್ಷಣ ಬೇಧಿ  ಬಂದ್ ಆಗಿದ್ದಲ್ಲದೆ ಮತ್ತೆರಡು ದಿನ ನಾನು ಲ್ಯಾಟ್ರೀನ್ ಕಡೆ ಹೋಗದಂತೆ ಮಾಡಿತ್ತು. ಆ ದಿನ  ಬಹುಶಃ ಇನ್ನು ಐದಾರು ತಾಸು ಹಾಗೇ ಬೇಧಿ ಆಗಿರುತ್ತಿದ್ದರೆ ಇಷ್ಟು ಹೊತ್ತಿಗೆ ನನ್ನ ೩೭ ನೇ ಪುಣ್ಯತಿಥಿ ಮುಗಿದಿರುತ್ತಿತ್ತು.
          ಆ ೧೬ರ ಹರೆಯದ ತರುಣ ಅಂದು ಮೆರೆದ ಸಮಯ ಪ್ರಜ್ಞೆ, ದಿಟ್ಟತನ ಎಲ್ಲ ಅಸಾಮಾನ್ಯವೇ ಆಗಿದ್ದವು. ಇದು ಅವನನ್ನು ನನ್ನ ಪ್ರಾಣಮಿತ್ರನನ್ನಾಗಿ ಮಾಡಿ ಬಿಟ್ಟಿತು. ಆ ದಿನ ಅಲ್ಲಿ ಇನ್ನೂ ಹತ್ತಾರು ಮಂದಿ ಸಹಪಾಟಿಗಳಿದ್ದರೂ ರಾಮಚಂದ್ರನ ಹೃದಯ ಮಾತ್ರ ನನ್ನ ನೋವಿಗೆ ಮಿಡಿದಿತ್ತು. ಅದ್ಯಾವ ಜನ್ಮದ ಬಂಧುವೋ ಅವನು! ಅವನ ಋಣ ತೀರಿಸಲು ಸಾಧ್ಯವೇ?
          ಅವನಿಗೂ ಒಂದು ತರಹದ ತೀವ್ರವಾದ ಹೊಟ್ಟೆನೋವು ಪದೇಪದೇ ಬಂದು ವಿಪರೀತ ಕಾಡುತ್ತಿತ್ತು. ಆಗೆಲ್ಲ ಅವನು ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದ. ನಾನು ತುಂಬಾ ಮರುಗಿ ಅವನ ಹೊಕ್ಕಳ ಸುತ್ತ ತುಪ್ಪ ಹಚ್ಚಿ ಹಿತವಾಗುವಂತೆ ತೀಡುತ್ತಿದ್ದೆ. ಅವನು ನನಗಿಂತ ಅನುಕೂಲಸ್ತನಾಗಿದ್ದ. ಅಲ್ಲಿಯ ಊಟದ ಅಸ್ತವ್ಯಸ್ತತೆ ಬಗ್ಗೆ  ತುಂಬಾ ರೋಸಿಹೋಗಿದ್ದ. ತಾನು ಏನೇ ಆದರೂ ಪಿಯುಸಿ ೨ ನೇ  ವರ್ಷಕ್ಕೆ ತನ್ನೂರು ಸಾಗರಕ್ಕೆ ಹೋಗುವದಾಗಿ ಹೇಳುತ್ತಾ ಕಡೆಗೆ ಹಾಗೇ  ಮಾಡಿದ. ತಾನು ಮುಂದೆ ಎಂ ಬಿ ಬಿ ಎಸ್ ಓದಿ ಮಿಲಿಟರಿಯಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸುವದಾಗಿ ಹೇಳುತ್ತಿದ್ದ. ಮುಂದೆ ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ಓದಿ ಡಾಕ್ಟರ್ ಆಗಿ ತನ್ನ ಕನಸಿನ ಸೈನ್ಯದ ಸೇವೆ ಕೂಡ ಮಾಡಿ ಮುಗಿಸಿ ಹೊರಬಂದು ಈಗ ಮಣಿಪಾಲದಲ್ಲಿ ಸುಪ್ರಸಿದ್ಧ ಸರ್ಜನ್ ಆಗಿ ನೆಮ್ಮದಿಯಿಂದಿದ್ದಾನೆ. ಪತ್ನಿ ಸಹ ವೈದ್ಯೆ. ಕೀರುತಿಗೊಬ್ಬ ಮಗ, ಆರತಿಗೊಬ್ಬ ಮಗಳಿರುವ ಚಂದದ ಸಂಸಾರ ಅವನದು.
          ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ಮಾತ್ರ ಒಮ್ಮೆ ಅವ ಸಿಕ್ಕಿದವ ನಂತರ ಸಿಕ್ಕಿದ್ದು ಕಳೆದ ಫೆಬ್ರುವರಿಯಲ್ಲಿ ನನ್ನ ಮಗ ಹರ್ಷನ ಮದುವೆಗೆಂದು ಶಿರಸಿಗೆ ಬಂದಾಗಲೇ. ಕಾಲನ ಏಟಿಗೆ ಅವನ ಸುಂದರ ಕಪ್ಪು ಗುಂಗುರುಗೂದಲು ಕರಗಿ ಬುರುಡೆ ಬೋಳಾಗಿದ್ದರೂ ಹೃದಯ ಮಾತ್ರ ಮತ್ತಷ್ಟು ಕಮನೀಯವಾಗಿದೆಯೆಂಬುದಕ್ಕೆ ನನ್ನೆಲ್ಲ "ನೆಸ್ಟ್" ಮಿತ್ರರು ಅವನನ್ನು ಕೂಡಲೇ ತಮ್ಮಲ್ಲೇ ಒಬ್ಬನೆಂಬಂತೆ ಒಪ್ಪಿ ಅಪ್ಪಿಕೊಂಡಿದ್ದೆ ಸಾಕ್ಷಿ.
          ರಾಮಚಂದ್ರಾ, ನಿನ್ನಂತ ಸನ್ಮಿತ್ರರ ಸಂತತಿ ಸಾವಿರ ಸಾವಿರವಾಗಲಿ.











Wednesday 16 October 2013

"ಸಿದ್ಧವನ"ವಾಸ

            ೧೯೭೫ರ ಜೂನ್ ಅಂತ್ಯದ ಹೊತ್ತಿಗೆ ನಾನು ಕಾಲೇಜಿನ ಉಚಿತ ಹಾಸ್ಟೆಲ್ "ಸಿದ್ಧವನ"ದ ಸದಸ್ಯನಾಗಿದ್ದೆ. ಕಾಲೇಜಿನ ಅಡ್ಮಿಶನ್ ಎಲ್ಲ ಮುಗಿದು ಹಾಸ್ಟೆಲ್ ರೂಮ್ ಸಹ ಹಂಚಿಕೆ ಮಾಡಿ ಆಗಿಹೋಗಿತ್ತು. "A " ಬ್ಲಾಕಿನ ಮಹಡಿ ಮೇಲಿನ ೭ನೇ ರೂಂ ಸಾಗರದ ರಾಮಚಂದ್ರ, ಶ್ರೀನಿವಾಸಮೂರ್ತಿ, ಸೂರಿ ಮತ್ತು ಪುತ್ತೂರಿನ ಸಂಜೀವ ಪೂಜಾರಿ ಇವರಿಗೆ ನೀಡಿ ಆಗಿತ್ತು. ಶಿರಸಿಯವನಾಗಿದ್ದಕ್ಕೆ ನನ್ನನ್ನೂ ಐದನೆಯವನಾಗಿ ಇವರ  ಜೊತೆ ಸೇರಿಸಿದರು. ಈ ನಾಲ್ಕೂ ಜನ ಒಂದು ಗೋಡೆಗುಂಟ ಸಾಲಾಗಿ ತಮ್ಮ ತಮ್ಮ ಹಾಸಿಗೆ ಇಟ್ಟುಕೊಂಡಿದ್ದರು ಮತ್ತು ಒಂದು ಮೂಲೆಯಲ್ಲಿ ನೀರಿನ ಬಕೆಟ್ಟುಗಳು ಇದ್ದವು. ನನಗೆ ಆ ಸಾಲಿನಲ್ಲಿ ಸ್ಥಳ ಇಲ್ಲದ್ದರಿಂದ ಸಂಜೀವನ ಕೆಳಭಾಗದಲ್ಲಿ ಭಾವ ಕೊಡಿಸಿದ್ದ ಚಾಪೆ,ಜಮಖಾನೆ, ದಿಂಬು ಮತ್ತು ಹಾಸ್ಟೆಲ್ನವರು ಕೊಟ್ಟ ಇಳಿಜಾರು ಪೆಟ್ಟಿಗೆ ಇಟ್ಟುಕೊಂಡು ಝಾಂಡಾ ಹೂಡಿದೆ. ಇಷ್ಟರಲ್ಲಾಗಲೇ settle ಆಗಿದ್ದ ಅವರಿಗೆ ನನ್ನ ಆಗಮನ ಕೊಂಚ ಕಿರಿಕಿರಿ ಉಂಟುಮಾಡಿದ್ದು ಸುಳ್ಳಲ್ಲ.
       ನನ್ನ ಪರಿಚಯ ಮಾಡಿಕೊಂಡಾಗ ಇದ್ದುದರಲ್ಲಿಯೇ ಕೊಂಚ ಆತ್ಮೀಯವಾಗಿ ಸ್ವೀಕರಿಸಿದ್ದು ರಾಮಚಂದ್ರ ಮಾತ್ರ. ಇನಿಷಿಯಲ್ಸ್ ಇಲ್ಲದ, ತಂದೆಯ ಹೆಸರನ್ನೂ ಜೊತೆಯಲ್ಲಿ ಸೇರಿಸಿಕೊಂಡಿದ್ದ ನನ್ನ ಹೆಸರನ್ನು ಇನ್ನೂ ಉದ್ದವಾಗಿಸಿ   ಹೇಳಿ, ತುಳುವಿನಲ್ಲಿ ತನ್ನ ದಕ್ಷಿಣ ಕನ್ನಡದ ಗೆಳೆಯರ ಜೊತೆ ಜೋಕ್ ಮಾಡಿ ನಕ್ಕಿದ್ದ ಸಂಜೀವ ಪೂಜಾರಿ. ಕ್ಲಾಸ್ನಲ್ಲಿ ಸಹ ನನ್ನ ಹೆಸರು ಹಾಜರಿ ಪುಸ್ತಕದ ಕೊನೆಯ ಹೆಸರಾಗಿ ಸೇರ್ಪಡೆ ಆಯಿತು. ಕೆಮಿಸ್ಟ್ರಿ ಕೃಷ್ಣ ಭಟ್ ಸರ್ ಹಾಜರಿ ಕರೆದು, ಕೊನೆಯಲ್ಲಿದ್ದ  ನನ್ನ ಹೆಸರು ಕರೆದು, ನನ್ನನ್ನು ನಿಲ್ಲಿಸಿ ಎಲ್ಲರಿಗೂ ಪರಿಚಯ ಮಾಡಿಸಿದರು.ತಕ್ಷಣ ಸಂಜೀವ ಪೂಜಾರಿ ಎದ್ದು ನಿಂತು, "ಸರ್, ಇವರ ಹೆಸರು ರವೀಂದ್ರ ಮಹಾಬಲೇಶ್ವರ್ ಗಣಪತಿ ಭಟ್ರು"  ಅಂತ ಹೇಳಿ  ಎಲ್ಲರನ್ನೂ ನಗಿಸಿದನು. ನಾನಂತೂ ಮತ್ತೂ ಕುಗ್ಗಿ ಹೋಗಿದ್ದೆ.  ಹೈಸ್ಕೂಲ್ನಲ್ಲಿ ನನ್ನ ಇಂಗ್ಲಿಷ್  ಇತರರಿಗಿಂತ ಸಾಕಷ್ಟು ಚೆನ್ನಾಗಿದ್ದರಿಂದ  ನನಗೆ ಅದರ ಬಗ್ಗೆ ಸ್ವಲ್ಪ ಹೆಚ್ಚೇ ಅಭಿಮಾನ ಇತ್ತು. ಆದರೆ ಇಲ್ಲಿ ಇಂಗ್ಲಿಷ್ ಮೀಡಿಯಂನಿಂದ ಬಂದ ಎಲ್ಲರಿಗೂ ಪಾಠ ನೀಟಾಗಿ ಅರ್ಥ ಆಗ್ತಾ ಇದ್ರೂ ನನಗೆ ಮಾತ್ರ  ಲೇಟ್ ಆಗಿ ಸೇರಿದ ಕಾರಣ ಪಾಠ ಮತ್ತು ಇಂಗ್ಲಿಷ್ ಎರಡೂ ಸಹ ತಲೆ  ಒಳಗೆ ಹೋಗಲು ಮುಷ್ಕರ ಹೂಡಿದ್ದವು. ಅಂತೂ  ಕ್ಲಾಸ್ ಮುಗಿಸಿ ಪೂರ್ತಿ ಅಯೋಮಯ ಸ್ಥಿತಿಯಲ್ಲಿದ್ದಾಗಲೆ "ಜಯಲಕ್ಷ್ಮಿ ಮೇಡಂ" ಬಿರುಗಾಳಿ ತರಹ ಕ್ಲಾಸ್ ಒಳಗೆ 
ಬಂದು ಬಿಟ್ಟಿದ್ದರು. 
             ತುಂಬಾ ಒಪ್ಪವಾಗಿ ಮೇಕ್ ಅಪ್  ಮಾಡಿಕೊಂಡು, ಸುಂದರವಾಗಿ ಸೀರೆ ಉಟ್ಟುಕೊಂಡು, ಅತ್ಯಂತ ಕ್ರಿಸ್ಪ್ ಆಗಿ ಕಾಣಿಸುತ್ತಿದ್ದ, ಮಧ್ಯಮಕ್ಕಿಂತ ಸ್ವಲ್ಪ ಸಣ್ಣ ಎನ್ನಬಹುದಾದ ಆಳ್ತನದ  ಜಯಲಕ್ಷ್ಮಿ ಮೇಡಂ ತಮ್ಮ ಹೈಹೀಲ್ಡ್  ಟಕಟಕಾಯಿಸುತ್ತ  ಮ್ಯಾಥ್ಸ್ ಹೇಳಲು ಬಂದವರೇ ಡಯಾಸ್ ಏರಿ, A={x  | x is a prime number less than 50} ಎಂದು ಬರೆದು A is a set of all x  such that x is a prime number less than 5೦ ಎಂದು ಓದಿದರು. ತಕ್ಷಣ ಎಲ್ಲರೂ ೧,೨,೩,೫,೭,೧೧,೧೩,೧೭,.............. ೪೩,೪೭. ಎಂದರು. ನನ್ನ ತಲೆ ಒಡೆದು  ಹೋಳು ಆಗುವದೊಂದೇ  ಬಾಕಿ ಇತ್ತು. ದಿಕ್ಕೇ ತೋಚದೆ ಕುಳಿತಿರುವಾಗಲೇ "ಯಾರಾದರೂ ತಮ್ಮ branch ಬದಲಾಯಿಸುವದಿದ್ದರೆ ಇಂದೇ ಕೊನೆಯ ದಿನ " ಎಂದು ನೋಟಿಸ್ ಬಂದಿತು. Greek and Latin ಆಗಿರೋ ಈ science ಗಿಂತಾ Commerceಗೆ change ತಗೊಂಡರಾಯಿತು ಎಂದು ನಿರ್ಣಯಿಸಿ, deskmate ಆಗಿದ್ದ ರಾಮಚಂದ್ರನಿಗೆ ಅದನ್ನೇ ಹೇಳಿದೆನು.  ಅಷ್ಟರಲ್ಲಾಗಲೇ ನನ್ನ ಬಗ್ಗೆ ಒಳ್ಳೆ ಭಾವನೆ ಬೆಳೆಸಿಕೊಂಡಿದ್ದ ಅವನು, "ಮಾರಾಯ, ನೀ ಹೆದರಬೇಡ .ಇಲ್ಲಿ ಇದ್ದವರೆಲ್ಲ ನಿನ್ನ ಲೆವೆಲ್ನವರೆ. ನೀ ತಡಮಾಡಿ ಸೇರಿದ್ದಕ್ಕೆ ಈ ಸಮಸ್ಯೆ ಅಷ್ಟೇ. ನಿನಗೆ ಕಷ್ಟ ಆದಲ್ಲಿ ನಾ ಹೇಳಿ ಕೊಡ್ತೇನೆ " ಎಂದು ಧೈರ್ಯ ತುಂಬಿದ್ದಕ್ಕೆ ನಾ scienceನಲ್ಲೆ  ಉಳಿದೆ. 
            ಮೊದಲ ಅರ್ಧವಾರ್ಷಿಕದಲ್ಲಿ ಪಾಠ ಸರಿಯಾಗಿ ತಿಳಿಯದಿದ್ದರೂ ಸಾಕಷ್ಟು ಗೆಳೆಯರು  ಸಿಕ್ಕಿದ್ದಂತೂ   ಸುಳ್ಳಲ್ಲ.    

Sunday 15 September 2013

ಮೊದಲ ತಿರುವು

          ನಾನು sslcಯಲ್ಲಿ ೮೩% ಅಂಕ ಗಳಿಸಿ ಪಾಸಾಗಿದ್ದುದು ನನ್ನ ಅಪ್ಪಯ್ಯನ ಮಟ್ಟಿಗೆ ಬಹಳ ಖುಷಿಯ ವಿಷಯವಾಗಿತ್ತು. ೬ ಮಕ್ಕಳ  ಸಂಸಾರ ತೂಗಿಸುವದರಲ್ಲಿ ಹೈರಾಣಾಗಿದ್ದ  ಅಪ್ಪಯ್ಯನಿಗೆ ನನ್ನ ಮಾರ್ಕ್ಸ್ ಕಾರ್ಡ್ ನನಗೊಂದು ನೌಕರಿ ಕೊಡಿಸೀತೆಂಬ ನಿರೀಕ್ಷೆ ಹುಟ್ಟಿಸಿದ್ದು ಸಹಜ. ಅದಕ್ಕೆ ಸರಿಯಾಗಿ,  ಈ ಬಡವನ ಮಗ ಮುಂದೆ ಓದಿ  ದೊಡ್ಡ ಮನುಷ್ಯನಾಗಿ ಬಿಟ್ಟರೆ ತಮ್ಮ ದೊಡ್ಡಸ್ತಿಕೆಗೆ ಕುಂದು ಬಂದೀತೆಂದು ಭಾವಿಸುವ ದೊಡ್ಡವರು ಎನಿಸಿಕೊಂಡವರು ತಲಾಶ್ ಮಾಡಿ ನಾ ಪಡೆದ ಮಾರ್ಕ್ಸ ಗೆ ಪೋಸ್ಟ್ & ಟೆಲಿಗ್ರಾಫ್ ನಲ್ಲಿ  ಡೈರೆಕ್ಟ್ ಆಗಿ ಜೂನಿಯರ್ ಇಂಜಿನಿಯರ್ ಹುದ್ದೆ ಸಿಗುತ್ತದೆ  ಎಂದು ನನ್ನ ಅಪ್ಪಯ್ಯನ ತಲೆ ತುಂಬಿ ಬಿಟ್ಟಿದ್ದರು. ಇದ್ಯಾವುದರ ಪರಿವೆಯೇ ಇಲ್ಲದ ನಾನು ಕಾಲೇಜ್ ಗೆ ಹೋಗುವ ಸವಿಗನಸು ಕಾಣ್ತಾ ಇದ್ದೆ.
         ಎಸ್ಸೆಲ್ಸಿಯಲ್ಲಿ ೮೩%  ಗಳಿಸಿದ್ದು ನನಗೆ ನಂಬಿಕೆನೇ ಬರ್ತಾ ಇರ್ಲಿಲ್ಲ. ರಿಸಲ್ಟ್ ಬಂದ  ದಿನ ನಾನು ಹೈಸ್ಕೂಲಿಗೆ ಹೋಗಿರಲಿಲ್ಲ.ಶಿರಸಿಯಿಂದ  ನಾನು ಶಾಲೆಗ ಹೋಗಲು ಉಳಿದುಕೊಂಡ ಮನೆಗೆ ಫೋನ್ ಮಾಡಿ ರಿಸಲ್ಟ್ ಬಂದಿದೆಯ ಎಂದು  ಕೇಳಿದೆ. ಅಕ್ಕ ಫೋನ್ ತಗೊಂಡಿದ್ಲು. ನನಗೋ ಎದೆ ಡವಡವ ಎನ್ನುತ್ತಾ ಇತ್ತು. ಮೊದ್ಲು ಕ್ರಷ್ಣಮೂರ್ತಿ ರಿಸಲ್ಟ್ ಏನಾಗಿದೆ ಎಂದು ಕೇಳ್ದೆ.  ಸೆಕೆಂಡ್ ಕ್ಲಾಸ್ ಎಂದ್ಲು. ನಂತರ ಶ್ರೀಪತಿದು ಏನಾಗಿದೆ ಎಂದೆ . ಸೆಕೆಂಡ್ ಕ್ಲಾಸ್ ಎಂದ್ಲು. ನಂತರ ಒಬ್ಬೊಬ್ಬರದ್ದಾಗಿ  ಸುನಂದ, ಚಂದ್ರು,  ಸೂರಿ, ಸುಮಂಗಲ, ಮಂಜುನಾಥ,ದತ್ತು ಹೀಗೆ ಎಲ್ಲರ ಮಾರ್ಕ್ಸೂ ಕೇಳ್ದೆ. ಯಾರೂ ಫಸ್ಟ್ ಕ್ಲಾಸ್ ಸಹಾ ಮಾಡಿರ್ಲಿಲ್ಲ. ಅಕ್ಕನ ಸ್ವರ ಗಂಭೀರವಾಗಿತ್ತು. ನನಗೆ ಹೆದರಿಕೆಯಿಂದ ಸ್ವರ ಹೊರಗೇ ಬರ್ತಾ ಇರ್ಲಿಲ್ಲ. ಇವರೆಲ್ಲ ಕ್ಲಾಸ್ನಲ್ಲಿ  ನನ್ನ ಸರೀಕರು ಅಥವಾ ಸ್ಪರ್ಧಿಗಳು. ಅಕ್ಕ ಇನ್ನೂ ಗಂಭೀರವಾಗಿ 'ಏನು? ನಿನ್ನ ರಿಸಲ್ಟ್ ಕೇಳ್ತಾನೆ ಇಲ್ವಲ್ಲ?' ಎಂದಾಗ ತೀರ ಕುಗ್ಗಿದ ಧ್ವನಿಯಲ್ಲಿ 'ಏನಾಗಿದೆ?' ಎಂದೆ . ಸ್ವರದಲ್ಲಿ ಸಂತೋಷ ಸೂಸ್ತ '೮೩% ಆಗಿದೆ'  ಎಂದ್ಲು . ಸಂತೋಷಾತಿರೇಕದಿಂದ "ಎಷ್ಟೂ" ಎಂದು ಕೂಗಿದ್ದಕ್ಕೆ ಸುತ್ತ   ಇದ್ದವರೆಲ್ಲಾ ತಿರುಗಿ ನನ್ನ ಕಡೆ ನೋಡತೊಡಗಿದ್ರು.     ,     .              ಮನೆಯಲ್ಲಿ ಅಪ್ಪಯ್ಯನ ಎಲ್ಲ ಮನವೊಲಿಕೆ ಹಾಗು ಸಿಟ್ಟು ಸೆಡವುಗಳನ್ನು ಮೀರಿ ಕಾಲೇಜಿಗೆ ಹೋಗುತ್ತೇನೆನ್ನುವ  ನನ್ನ ಹಠ  ಜಾಸ್ತಿ ಆದಾಗ ಅಪ್ಪಯ್ಯ ಕೈಚೆಲ್ಲಿ, "ಏನ್ ಬೇಕಾದ್ರು ಮಾಡಿಕೋ, ನಂಗೆ ಮಾತ್ರ ನಿನ್ನ ಓದಿಸೋ ತ್ರಾಣ ಇಲ್ಲ" ಎಂದು  ಒಂದು ತರಹ ನಿರ್ಲಿಪ್ತ ಸಮ್ಮತಿ ನೀಡಿದ. ಶಿರಸಿಯಲ್ಲಿ ಜುಲೈ ೧೫ರ ನಂತರ ಕಾಲೇಜ್ ಶುರು ಆಗೋದು ರೂಢಿ . ಅಷ್ಟರೊಳಗೆ ಯಾರಾದ್ರು ದಾನಿಯನ್ನ ಹುಡುಕಿಕೊಳ್ಳಬೇಕಿತ್ತು.. ಸೀದಾ ಗೋಕರ್ಣಕ್ಕೆ ಭಾವನ ಮನೆಗೆ ಹೋದೆ. ಕಾಲೇಜಿಗೆ ಸೇರಬೇಕೆಂಬ ನನ್ನ ಅಭಿಲಾಷೆಯನ್ನ ಅವನೆದುರು ಹೇಳಿಕೊಂಡೆ. ನನ್ನ ಮಾರ್ಕ್ಸ್ ನೋಡಿ ಖುಷಿಯಾದ ಭಾವ ತಾನು ಸಹಾಯ ಮಾಡುವದಾಗಿ ಹೇಳಿ ಧರ್ಮಸ್ಥಳದಲ್ಲಿ ಇದ್ದ ತನ್ನ ಪರಿಚಯದವರೊಬ್ಬರಿಗೆ ಫೋನ್ನಲ್ಲಿ ಮಾತಾಡಿ ಅವರ ಕಾಲೇಜಿನಲ್ಲಿ ನನಗೊಂದು ಸೀಟಿಗೆ ವ್ಯವಸ್ಥೆ ಮಾಡಿದ ಮತ್ತು ತಡ ಮಾಡದೆ ನನ್ನ ಕರ್ಕೊಂಡು ಉಜಿರೆಗೆ ಹೋದ .
        ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ತುಂಬಾ ಸುಂದರವಾದ ಕಟ್ಟಡದಲ್ಲಿತ್ತು ಪ್ರಿನ್ಸಿಪಾಲರಾದ ಶ್ರೀ ಪ್ರಭಾಕರ್ ಅವರು ನನ್ನ ಮಾರ್ಕ್ಸ್ ಕಾರ್ಡ್ ನೋಡಿ ಎಲ್ಲ ಅಡ್ಮಿಶನ್ ಮುಗಿದಿದ್ರು ಸಹ ನನಗೆ ಸೀಟ್ ನೀಡಿ ತಮ್ಮ ಫ್ರೀ ಹಾಸ್ಟೆಲ್ ಸಿದ್ಧವನದಲ್ಲಿ ಸಹಾ ನನಗೆ ಒಂದು ಸೀಟ್ ಕೊಟ್ಟರು ಅಲ್ಲಿಗೆ ಮೊದಲ ತಡೆ ದಾಟಿದಂತಾಗಿತ್ತು.                                                     ನನ್ನ ಜೀವನದ ಮೊದಲ ತಿರುವನ್ನು ನೀಡಿದ ಗೋಕರ್ಣ ಮಹಾದೇವ ಭಾವ ನನ್ನ ಪಾಲಿನ ಪ್ರಾತಃಸ್ಮರಣೀಯ ವ್ಯಕ್ತಿ.